Responsive image

Press Information Bureau

Government of India

Prime Minister's Office

ಸರ್ದಾರ್ ಪಟೇಲ್ ಜಯಂತಿಯಂದು ಅವರಿಗೆ ಪುಷ್ಪ ನಮನ ಸಲ್ಲಿಸಿದ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಿ;‘ಏಕತೆಗಾಗಿ ಓಟಕ್ಕೆ’ ಚಾಲನೆ ನೀಡಿದ ಪ್ರಧಾನಿ

Posted On :31, October 2017 10:15 IST

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿಯಾದ ಇಂದು ನವ ದೆಹಲಿಯ ಪಟೇಲ್ ಚೌಕ್ ನಲ್ಲಿರುವ ಸರ್ದಾರ್ ಪಟೇಲ್ ಪುತ್ಥಳಿಗೆ ರಾಷ್ಟ್ರಪತಿ ಶ್ರೀ ರಾಮನಾಥ ಕೋವಿಂದ್, ಉಪ ರಾಷ್ಟ್ರಪತಿ ಶ್ರೀ ವೆಂಕಯ್ಯನಾಯ್ಡು ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪುಷ್ಪ ನಮನ ಸಲ್ಲಿಸಿದರು.

ನಂತರ ಪ್ರಧಾನಮಂತ್ರಿಯವರು ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ‘ಏಕತೆಗಾಗಿ ಓಟ’ಕ್ಕೆ ಹಸಿರು ನಿಶಾನೆ ತೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಸರ್ದಾರ್ ಪಟೇಲ್ ಅವರ ಕೊಡುಗೆಯನ್ನು ಅದರಲ್ಲೂ ದೇಶದ ಏಕತೆಗೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.

ನಮ್ಮ ರಾಷ್ಟ್ರ ನಿರ್ಮಾಣಕ್ಕೆ ಸರ್ದಾರ್ ಪಟೇಲ್ ಅವರು ನೀಡಿದ ಕೊಡುಗೆಯನ್ನು ಭಾರತದ ಯುವಕರು ಗೌರವಿಸುತ್ತಾರೆ ಎಂದು ಪ್ರಧಾನಿ ಹೇಳಿದರು.

ಭಾರತವು ತನ್ನ ವೈವಿಧ್ಯತೆಗೆ ಹೆಮ್ಮೆ ಪಡುತ್ತದೆ, ಮತ್ತು ‘ಏಕತೆಗಾಗಿ ಓಟ’ದಂಥ ಕಾರ್ಯಕ್ರಮಗಳು ನಮಗೆ ನಮ್ಮ ಹಿರಿಮೆ ಮತ್ತು ಏಕತೆಗೆ ಪುನರ್ ಚಾಲನೆ ನೀಡಲು ಅವಕಾಶ ನೀಡುತ್ತದೆ ಎಂದರು.

ಶ್ರೀ ನರೇಂದ್ರ ಮೋದಿ ಅವರು ಇಂದು ಪುಣ್ಯತಿಥಿ ಆಚರಿಸಲಾಗುತ್ತಿರುವ ಮಾಜಿ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರನ್ನೂ ಸ್ಮರಿಸಿದರು.

ಸ್ಪರ್ಧಿಗಳಿಗೆ ಪ್ರಧಾನಮಂತ್ರಿಯವರು ಪ್ರತಿಜ್ಞಾವಿಧಿ ಬೋಧಿಸಿದರು.

******